Alliance University 360 degree vertual tour

Kannada Rajyotsava Celebrations
November 2021

The prime event of the 66th Kannada Rajyotsava Celebrations was held on the 13th of November, 2021, at Alliance University jointly organized by Kannada Language Center, Department of Language and Literature in association with Department of Student Support Services.

Many competitions were held for students, teaching and non-teaching staff of the University including essay, speech and music competition.

The event was inaugurated by the Pro Chancellor, Mr. Abhay G. Chebbi and Vice-Chancellor, Dr. Anubha Singh, with flag hoisting and garlanding Kannada goddess Bhuvaneshwari. The state anthem – Nadageethe was also sung on the occasion.

Dr. Vivekanand Sajjan, Assistant Professor - Department of Language and Literature explained the background of the Kannada Rajyotsava Celebration and discussed the great heritage of Kannada Literature and Poetry and the ideas of universal values among the Kannada poets.

Prof. Asharani N. R. welcomed guests who arrived at the event. The lighting of the lamp was initiated by the dignitaries. Students presented a welcome dance.

Pro Chancellor, Alliance University, Mr. Abhay G. Chebbi, expressed his views on the magnificent heritage and grandeur of Karnataka. He opined that the Kannada Flag is an indication of peace and reassurance and a sign of Kannada identity. Talking about Karnataka he said, that from growing coffee in Malnad, to the information technology sector, state is being considered as the fore runner. He also recalled that the first Radio City FM station was established in Bengaluru.

Speaking on the occasion, Pro Vice-Chancellor, Dr. Punith Cariappa, emphasized the need to preserve and nurture Kannada consciousness. She said that we must keep the consciousness of Kannada language alive through studying and incorporating Kannada poetry into our live and reciting the songs that proclaim the importance of the land of Karnataka such as Barisu Kannada Dindima, Hesaraithu Karnataka and so on.

Mr. Raghavendra Hegde, artist of an international fame, presented his varied sand art and also discussed the specialty of the sand art.

Vice-Chancellor, Alliance University, Dr. Anubha Singh, distributed prizes among students winning various competitions held on Kannada Rajyotsava.

Alliance University has always been working to preserve and develop Kannada consciousness besides representing the diverse culture of the country. In this regard Kannada Rajyotsava was celebrated with great pomp this year as always.


ಕನ್ನಡ ರಾಜ್ಯೋತ್ಸವ ಸಮಾರಂಭ

ಅಲಯನ್ಸ್‌ ವಿಶ್ವವಿದ್ಯಾಲಯದ ಕನ್ನಡ ಭಾಷಾ ಕೇಂದ್ರ, ಭಾಷೆ ಹಾಗೂ ಸಾಹಿತ್ಯ ವಿಭಾಗ, ಹಾಗೂ ವಿದ್ಯಾರ್ಥಿ ಬೆಂಬಲ ಸೇವೆಗಳ ವಿಭಾಗದ ವತಿಯಿಂದ ೬೬ನೇ ಕನ್ನಡ ರಾಜ್ಯೋತ್ಸವದ ಮುಖ್ಯ ಸಮಾರಂಭವನ್ನು ೧೩/೧೧/೨೦೨೧ರಂದು ಅತ್ಯಂತ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿತ್ತು.

೦೩/೧೧/೨೦೨೧ರಿಂದ ೧೨/೧೧/೨೦೨೧ರವರೆಗೆ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರಿಗಾಗಿ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ, ಸಂಗೀತ ಸ್ಪರ್ಧೆಗಳು ಸೇರಿದಂತೆ ಹಲವು ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.

೧೩/೧೧/೨೦೨೧ರಂದು ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಮುಖ್ಯ ಸಮಾರಂಭವನ್ನು ಸಹ-ಕುಲಾಧಿಪತಿಗಳಾದ ಶ್ರೀ ಅಭಯ ಚೆಬ್ಬಿ ಅವರು ಹಾಗೂ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಅನುಭಾ ಸಿಂಗ್‌ ಅವರು ಬೆಳಿಗ್ಗೆ ೦೯:೦೦ ಗಂಟೆಗೆ ಕನ್ನಡ ಧ್ವಜಾರೋಹಣವನ್ನು ನೆರವೇರಿಸಿ ತಾಯಿ ಭುವನೇಶ್ವರಿಗೆ ಪುಷ್ಪನಮನವನ್ನು ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಆ ಸಂದರ್ಭದಲ್ಲಿ ನಾಡಗೀತೆಯನ್ನು ಪ್ರಸ್ತುತಪಡಿಸಲಾಯಿತು.

ಕನ್ನಡ ರಾಜ್ಯೋತ್ಸವದ ಮುಖ್ಯ ಸಮಾರಂಭವನ್ನು ಅಂದು ಮಧ್ಯಾಹ್ನ ೨:೦೦ ಗಂಟೆಯಿಂದ ೫:೦೦ ಗಂಟೆಯವರೆಗೆ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮದ ಸಂಯೋಜಕರು ಹಾಗೂ ಭಾಷೆ ಹಾಗೂ ಸಾಹಿತ್ಯ ವಿಭಾಗದ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ. ವಿವೇಕಾನಂದ ಸಜ್ಜನ ಅವರು ಕನ್ನಡ ರಾಜ್ಯೋತ್ಸವ ಆಚರಣೆಯ ಹಿನ್ನೆಲೆಯನ್ನು ವಿವರಿಸಿದ್ದಲ್ಲದೆ, ಕನ್ನಡ ಸಾಹಿತ್ಯದ ಹಾಗೂ ಕವಿಗಳ ಶ್ರೇಷ್ಠ ಪರಂಪರೆ ಹಾಗೂ ವಿಶ್ವ ಮೌಲಿಕವಾದ ವಿಚಾರಗಳ ಕುರಿತು ಚರ್ಚಿಸಿದರು.

ಪ್ರೊ. ಆಶಾರಾಣಿ ಎನ್. ಆರ್‌ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದರು. ಜ್ಯೋತಿ ಬೆಳಗಿಸುವುದರ ಮೂಲಕ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳು ಸ್ವಾಗತ ನೃತ್ಯವನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮವನ್ನುದ್ದೇಶಿಸಿ ಹಿತ ನುಡಿಗಳನ್ನಾಡಿದ ಅಲಯನ್ಸ್‌ ವಿಶ್ವವಿದ್ಯಾಲಯದ ಸಹ-ಕುಲಾಧಿಪತಿಗಳಾದ ಶ್ರೀ ಅಭಯ ಚೆಬ್ಬಿ ಅವರು ಕರ್ನಾಟಕದ ಭವ್ಯ ಪರಂಪರೆ ಹಾಗೂ ಹಿರಿಮೆ ಗರಿಮೆಯ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕನ್ನಡ ಬಾವುಟವು ಶಾಂತಿ ಮತ್ತು ಧೈರ್ಯದ ಪ್ರತೀಕವಾಗಿದ್ದು, ಕನ್ನಡಿಗರ ಅಸ್ಮಿತೆಯ ಸಂಕೇತವಾಗಿದೆ ಎಂದು ಪ್ರತಿಪಾದಿಸಿದರು.

ಮಲೆನಾಡಿನಲ್ಲಿ ಕಾಫಿ ಬೆಳೆಯುವುದರಿಂದ ಹಿಡಿದು ಮಾಹಿತಿ ತಂತ್ರಜ್ಞಾನ ಕ್ಷೇತ್ರದವರೆಗೆ ಕರ್ನಾಟಕವು ಮುಂಚೂಣಿಯಲ್ಲಿ ಮುನ್ನುಗ್ಗುತ್ತಿರುವುದನ್ನು ಕುರಿತು ಚರ್ಚಿಸಿದ ಅವರು ಬೆಂಗಳೂರಿನಲ್ಲಿ ಮೊದಲ ಎಫ್. ಎಂ ರೇಡಿಯೋ ಸಿಟಿ ಕೇಂದ್ರ ಸ್ಥಾಪಿತವಾಗಿರುವುದನ್ನು ಸ್ಮರಿಸಿದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ವಿಶ್ವವಿದ್ಯಾಲಯದ ಸಹ -ಕುಲಪತಿಗಳಾದ ಡಾ.ಪುನೀತ್‌ ಕಾರಿಯಪ್ಪ ಅವರು ಕನ್ನಡ ಪ್ರಜ್ಞೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾದ ಅಗತ್ಯತೆಯನ್ನು ಪ್ರತಿಪಾದಿಸಿದರು. ಬಾರಿಸು ಕನ್ನಡ ಡಿಂಡಿಮವ, ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಮೊದಲಾದ ನಾಡಿನ ಮಹತ್ವವನ್ನು ಸಾರುವ ಗೀತೆಗಳನ್ನು ಸ್ಮರಿಸುವುದರ ಮೂಲಕ ಕನ್ನಡ ಸಾಹಿತ್ಯದ ಕವಿ ವಾಣಿಗಳನ್ನು ಅಧ್ಯಯನ ಮಾಡುವ ಮೂಲಕ ಹಾಗೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಾವು ಕನ್ನಡತನದ ಪ್ರಜ್ಞೆಯನ್ನು ಸದಾ ಜಾಗೃತವಾಗಿರಿಸಿಕೊಂಡಿರಬೇಕಾಗುತ್ತದೆ ಎಂದು ಪ್ರತಿಪಾದಿಸಿದರು.

ಅಂತರ್‌ ರಾಷ್ಟ್ರೀಯ ಖ್ಯಾತಿಯ ಮರಳು ಕಲೆಯ ಕಲಾಕಾರರಾದ ಶ್ರೀ ರಾಘವೇಂದ್ರ ಹೆಗಡೆ ಅವರು ವೈವಿಧ್ಯಮಯವಾದ ತಮ್ಮ ಮರಳು ಕಲೆಯನ್ನು ಪ್ರಸ್ತುತಪಡಿಸಿದರು. ಮರಳು ಕಲೆಯ ವಿಶೇಷತೆಯನ್ನು ಕುರಿತು ಚರ್ಚಿಸಿದರು.

ವಿದ್ಯಾರ್ಥಿಗಳು, ವಿಶ್ವವಿದ್ಯಾಲಯದ ಸಿಬ್ಬಂದಿ ವರ್ಗದವರಿಂದ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕನ್ನಡ ರಾಜ್ಯೋತ್ಸವದ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಅನುಭಾ ಸಿಂಗ್‌ ಅವರು ಬಹುಮಾನಗಳನ್ನು ವಿತರಿಸಿದರು. ದೇಶದ ವೈವಿಧ್ಯಮಯ ಸಂಸ್ಕೃತಿಯನ್ನು ಪ್ರತಿನಿಧಿಸುವುದರ ಜೊತೆಗೆ ಕನ್ನಡ ಪ್ರಜ್ಞೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಕಾರ್ಯವನ್ನು ಅಲಯನ್ಸ್‌ ವಿಶ್ವವಿದ್ಯಾಲಯವು ಯಾವತ್ತಿಗೂ ಕೂಡ ಮಾಡಿಕೊಂಡು ಬರುತ್ತಿದೆ. ಆ ನಿಟ್ಟಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.


Share your stories and articles on: insights@alliance.edu.in