ಅಲಯನ್ಸ್‌ ಉದಾರ ಕಲೆಗಳ ನಿಕಾಯ, ಭಾಷೆ ಮತ್ತು ಸಾಹಿತ್ಯ ವಿಭಾಗ
ಭಾರತೀಯ ಭಾಷಾ ಸಂಸ್ಥಾನ ಮೈಸೂರು ಇವರ ಸಹಯೋಗದಲ್ಲಿ
ರಾಷ್ಟ್ರೀಯ ವಿಚಾರ ಸಂಕಿರಣದ ಆಯೋಜನೆ

ಪ್ರತಿಯೊಬ್ಬ ವ್ಯಕ್ತಿಯ ಮೊದಲ ಭಾಷೆ ಮಾತೃಭಾಷೆಯಾಗಿದೆ, ಅದೇ ಸಂದರ್ಭದಲ್ಲಿ ಮಾತೃಭಾಷೆಯ ಇನ್ನೊಂದು ಆಯಾಮವು ಮಾನವನ ಸಾಮಾಜಿಕ ಸಂಸ್ಕಾರ ಮತ್ತು ಸಾಂಸ್ಕೃತಿಕ ಪ್ರಜ್ಞೆಗೆ ಸಂಬಂಧಿಸಿದೆ. ಸಮಾಜ ಮತ್ತು ಭಾಷಾ ಸಮುದಾಯದ ಪರಿಸರದಲ್ಲಿ ವ್ಯಕ್ತಿಯ ವಿಚಾರಧಾರೆಗಳ ಚೌಕಟ್ಟು ರೂಪುಗೊಳ್ಳುತ್ತದೆ. ಅದು ಆ ಸಮುದಾಯದ ಜನಾಂಗೀಯ ಇತಿಹಾಸ, ಸಾಂಸ್ಕೃತಿಕ ಪ್ರಜ್ಞೆ, ವ್ಯವಹಾರ ಮತ್ತು ಸಾಹಿತ್ಯಿಕ ಸಂಪ್ರದಾಯಗಳಿಗೆ ಸಂಬಂಧಿಸಿದೆ. ಭಾಷೆ, ಸಂಸ್ಕೃತಿ, ಶಿಕ್ಷಣ ಮತ್ತು ಸಾಹಿತ್ಯಗಳು ಸಮಾಜದ ಚಟುವಟಿಕೆಗಳು ಮತ್ತು ಮನೋಧೋರಣೆಗಳ ಮೇಲೆ ವ್ಯಾಪಕವಾದ ಪ್ರಭಾವವನ್ನು ಹೊಂದಿವೆ. ಇವುಗಳ ಮೂಲಕ ನಾವು ಶೈಕ್ಷಣಿಕ ಪರಿಕಲ್ಪನೆಗಳನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ, ನಮ್ಮ ಹೊಸ ಪೀಳಿಗೆಯು ಸಾಂಸ್ಕೃತಿಕ ಮೌಲ್ಯಗಳೊಂದಿಗೆ ಸುಲಭವಾಗಿ ಪರಿಚಿತವಾಗುತ್ತ ಹೋಗಲು ಸಾಧ್ಯವಾಗುತ್ತದೆ ಮತ್ತು ಇಂದಿನ ಸಂದರ್ಭದಲ್ಲಿ, ಇದು ವೃತ್ತಿಪರ ದೃಷ್ಟಿಕೋನದಿಂದ ಕೂಡ ಬಹಳ ಮುಖ್ಯವಾಗಿದೆ. ಸಮಾಜದಲ್ಲಿನ ಕಲೆ, ಭಾಷೆ, ಶಿಕ್ಷಣ, ವೃತ್ತಿ ಮತ್ತು ಸಂಸ್ಕೃತಿಯ ಸಮನ್ವಯವು ಸಮಾಜವನ್ನು ನಾವೀನ್ಯತೆಯ ಕಡೆಗೆ ಕೊಂಡೊಯ್ಯುತ್ತದೆ ಮತ್ತು ಅಭಿವೃದ್ಧಿಯ ಹಾದಿಯನ್ನು ಸುಗಮಗೊಳಿಸುತ್ತದೆ. ಪ್ರಸ್ತುತ ಸಮಯದಲ್ಲಿ ಸಾಮಾಜಿಕ ಮತ್ತು ವೃತ್ತಿಪರ ಸಂಶೋಧನೆಯ ವೈಧಾನಿಕತೆಯು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಈ ಮೂಲಕ ವಿವಿಧ ಪ್ರದೇಶಗಳ ಸಂಸ್ಕೃತಿ, ಆಚಾರ-ವಿಚಾರ, ನಡವಳಿಕೆ, ಸ್ಥಳೀಯತೆಯ ಅರಿವು, ಸಾಮಾಜಿಕ ಹೊಣೆಗಾರಿಕೆಯ ಅರಿವು, ಸ್ಥಳೀಯ ಕಲೆಗಳ ಕೊಡುಗೆ, ಜಾನಪದ ಸಂಸ್ಕೃತಿ ಮತ್ತು ವಿವಿಧ ಪ್ರದೇಶಗಳ ಭಾಷೆಯ ಕೊಡುಗೆಯ ಅರಿವು ಪ್ರಾಪ್ತವಾಗುತ್ತದೆ ಮತ್ತು ಸಮಾಜವನ್ನು ಹೊಸ ದೃಷ್ಟಿಕೋನದೆಡೆಗೆ ಕೊಂಡೊಯ್ಯುತ್ತದೆ. ಈ ಹೊಸತನವನ್ನು ಬೆಳೆಸುವಲ್ಲಿ ಭಾಷೆ ಮತ್ತು ಸಾಹಿತ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ವಿಶೇಷ ಸಂಗತಿಗಳು ಮತ್ತು ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಅಲಯನ್ಸ್ ವಿಶ್ವವಿದ್ಯಾಲಯದ ಉದಾರ ಕಲೆಗಳ ನಿಕಾಯದ ಭಾಷೆ ಮತ್ತು ಸಾಹಿತ್ಯ ವಿಭಾಗ ಹಾಗೂ ಭಾರತೀಯ ಭಾಷಾ ಸಂಸ್ಥಾನ ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ 'ಭಾರತೀಯ ಭಾಷೆಯ ಮೂಲಕ ವೃತ್ತಿಪರ ಮತ್ತು ಕೌಶಲ್ಯ ಶಿಕ್ಷಣ: ಸವಾಲುಗಳು ಮತ್ತು ಸಾಧ್ಯತೆಗಳು' ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ. ಶಿಕ್ಷಣ ತಜ್ಞರು, ಸಾಹಿತ್ಯ ಪ್ರೇಮಿಗಳು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ಈ ವಿಚಾರ ಸಂಕಿರಣದ ಚರ್ಚೆಯಿಂದ ಖಂಡಿತವಾಗಿಯೂ ಪ್ರಯೋಜನ ಪಡೆಯುತ್ತಾರೆ ಎಂಬುದು ನಮ್ಮ ನಂಬಿಕೆ.

ಔಚಿತ್ಯ ಮತ್ತು ಮಹತ್ವ: ಈ ಎರಡು ದಿನಗಳ ವಿಚಾರ ಸಂಕಿರಣದ ಮೂಲಕ, ಭಾರತದ ವಿವಿಧ ರಾಜ್ಯಗಳ ಸ್ಥಳೀಯ ಕಲೆಗಳಾದ- ಕರ್ನಾಟಕದ “ಬಿದರಿ ಕಲೆ”, 'ಮಾರ್ವಾರಿ”, ಬಿಕಾನೇರಿ ಮತ್ತು ರಾಜಸ್ಥಾನದ ಹದೌತಿ ಕಲೆ, ಆಂಧ್ರ ಪ್ರದೇಶದ 'ಆಟಿಕೊಪ್ಪಕ, ಕೊಂಡಪಲ್ಲಿ ಬೊಂಬೆಗಳು , ಚೇನೇತ ಮತ್ತು ಅಡ್ಡಕಂ ಕಲೆ' ಸೇರಿದಂತೆ ಇತರೆ ಪ್ರಮುಖ ಕಲೆಗಳು ಮತ್ತು ರಾಜ್ಯ ಸೇರಿದಂತೆ ದಕ್ಷಿಣ ಭಾರತದ ಸಾಹಿತ್ಯ ಸಂಪತ್ತು ಮತ್ತು ಜಾನಪದ ಸಂಪತ್ತಿನ ಕುರಿತು ಚರ್ಚಿಸಲಾಗುವುದು. ಇದರ ಮೂಲಕ, ಬಹು ಆಯಾಮದ ಮೌಲ್ಯಯುತವಾದ ವಿಚಾರಗಳು ಹೊರಹೊಮ್ಮುತ್ತವೆ. ಈ ವಿಚಾರ ಸಂಕಿರಣದಲ್ಲಿ ಹಿಂದಿ, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳ ವಿದ್ವಾಂಸರು ಭಾಗವಹಿಸಲಿದ್ದಾರೆ. ಈ ವಿಚಾರ ಸಂಕಿರಣದ ಮುಖ್ಯ ಉದ್ದೇಶವೇನೆಂದರೆ ಎಲ್ಲಾ ಹಂತದ ಶಿಕ್ಷಣ ತಜ್ಞರನ್ನು ಒಟ್ಟುಗೂಡಿಸುವುದು, ಅವರ ಜ್ಞಾನ, ಆಲೋಚನೆಗಳು, ಸಂಶೋಧನೆಯ ಹೊಸ ಆಯಾಮಗಳೊಂದಿಗ ಮುಖಾಮುಖಿಯಾಗುವುದು ಮತ್ತು ಶಿಕ್ಷಣ ಮತ್ತು ಸಂಶೋಧನೆಯಲ್ಲಿ ನಾವೀನ್ಯತೆಯನ್ನು ತರಲು ಪ್ರಯತ್ನಿಸುವುದು, ಜಾಗತಿಕ ಮಟ್ಟದಲ್ಲಿ ಭಾರತೀಯ ಪರಂಪರೆಯನ್ನು ಪ್ರತಿನಿಧಿಸುವ ವ್ಯಕ್ತಿಗಳೊಂದಿಗೆ ಮುಖಾಮುಖಿಯಾಗುವುದು ಮತ್ತು ಸಮಕಾಲೀನ ಸವಾಲುಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸುವುದಾಗಿದೆ.

ವಿವಿಧ ವಿಷಯಗಳ ಕುರಿತು ವಿಚಾರ ಸಂಕಿರಣದಲ್ಲಿ ಆಹ್ವಾನಿತ ವಿದ್ವಾಂಸರ ಆಳವಾದ ವಿಶ್ಲೇಷಣೆ ಮತ್ತು ವಿಚಾರಗಳ ಅಭಿವ್ಯಕ್ತಿಯಿಂದ ಭಾಗವಹಿಸುವ ವಿವಿಧ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ ಪ್ರತಿನಿಧಿಗಳು ಅನೇಕ ಮಹತ್ವದ ವಿಚಾರಗಳ ವೈವಿಧ್ಯಮಯ ಆಯಾಮಗಳನ್ನು ಕಂಡುಕೊಳ್ಳಲು ಸಹಕಾರಿಯಾಗುವುದು. ಸಮಾಜದಲ್ಲಿ ಭಾಷೆ ಮತ್ತು ಸಾಹಿತ್ಯವು ನಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ, “ವಸುಧೈವ ಕುಟುಂಬಕಂ” ಎಂಬ ಮನೋಭಾವವನ್ನು ಅರಿತುಕೊಳ್ಳುವಲ್ಲಿ ಮತ್ತು ಪರಸ್ಪರ ಐಕ್ಯತೆಯನ್ನು ಕಾಪಾಡಿಕೊಳ್ಳುವಲ್ಲಿ ಭಾರತೀಯ ಭಾಷೆಗಳ ಮಹತ್ವವು ಅರ್ಥವಾಗುತ್ತದೆ. ಅಲ್ಲದೆ, ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲಿ ಭಾರತೀಯ ಭಾಷೆಗಳನ್ನು ಒಳಗೊಳ್ಳುವುದರಿಂದ ದೇಶದ ಬೌದ್ಧಿಕ ಚಿಂತನೆಯ ಬೆಳವಣಿಗೆಯಲ್ಲಿ ಹೇಗೆ ಭಾಷೆಗಳು ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ತುಲನಾತ್ಮಕ ದೃಷ್ಟಿಕೋನದಿಂದ ತಿಳಿಯಬಹುದು. ಭಾರತೀಯ ಸಂಸ್ಕೃತಿಯು ಯಾವಾಗಲೂ ಸಾಹಿತ್ಯಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಭಾವನೆಗಳಿಂದ ಕೂಡಿದೆ. ಈ ವಿಚಾರ ಸಂಕಿರಣದ ಮೂಲಕ ಹೊಸ ಶಿಕ್ಷಣ ನೀತಿಯಡಿ ಸಮಾಜದಿಂದ ಕಣ್ಮರೆಯಾಗುತ್ತಿರುವ ಸಂಸ್ಕೃತಿಯ ಮರುಸ್ಥಾಪನೆಯಲ್ಲಿ ಭಾಷೆಗಳ ಮಹತ್ವವನ್ನು ಪ್ರಸ್ತುತಪಡಿಸಲಾಗುವುದು. ಇಂದಿನ ಕಾಲದ ಅಗತ್ಯಕ್ಕೆ ತಕ್ಕಂತೆ ಭಾಷೆ ತನ್ನನ್ನು ತಾನು ಹೊಂದಿಸಿಕೊಳ್ಳುವುದು ಅಗತ್ಯವಾಗಿದೆ. ಆದರೆ ಅದು ತನ್ನ ಪರಂಪರೆಯನ್ನು ಉಳಿಸಿಕೊಂಡು ಹೋಗುವುದರ ಮೂಲಕವೇ ಸಮಾಜವನ್ನು ನಿರಂತರ ಅಭಿವೃದ್ಧಿಯ ಮೂಲಕ ಸಮೃದ್ಧಿಯೆಡೆಗೆ ಕೊಂಡೊಯ್ಯುವುದು ಸಾಧ್ಯವಾಗುತ್ತದೆ.

ಧ್ಯೇಯೋದ್ದೇಶಗಳು: ಇದುವರೆಗೆ ಗಮನ ಹರಿಸದ ಭಾರತೀಯ ಜ್ಞಾನ ವ್ಯವಸ್ಥೆಯನ್ನು ಚರ್ಚಿಸಿ ಪಠ್ಯಕ್ರಮಕ್ಕೆ ಸೇರಿಸುವ ದೃಷ್ಟಿಕೋನದಿಂದ ಚರ್ಚೆ ನಡೆಸಲಾಗುವುದು. ಭಾರತದ ಜ್ಞಾನ ಸಂಪತ್ತನ್ನು ನಾವೀನ್ಯತೆ ಮತ್ತು ತಂತ್ರಜ್ಞಾನದೊಂದಿಗೆ ಸಂಯೋಜಿಸುವ ಮೂಲಕ ಹೇಗೆ ವೃತ್ತಿಪರಗೊಳಿಸಬಹುದು ಎಂಬುದರ ಸಾಧ್ಯತೆಗಳ ಕುರಿತು ಚರ್ಚಿಸುವ ಉದ್ದೇಶವನ್ನು ಹೊಂದಲಾಗಿದೆ.

ವಿವಿಧ ವಿಷಯಗಳ ಕೋರ್ಸ್‌ಗಳಿಗೆ ಪಠ್ಯಕ್ರಮಗಳನ್ನು ಸಿದ್ಧಪಡಿಸುವಲ್ಲಿ ಭಾರತದ ಪ್ರತಿಯೊಂದು ರಾಜ್ಯದ ವಿದ್ವಾಂಸರೊಂದಿಗೆ ಸಂಪರ್ಕದಲ್ಲಿರಲು ಮತ್ತು ಬಹುಭಾಷಾ ಪಠ್ಯ ವಿಷಯ ವಸ್ತುಗಳನ್ನು ರೂಪಿಸುವ ಸಾಧ್ಯತೆಗಳ ಬಗ್ಗೆ ಚರ್ಚಿಸಲು ಯೋಜಿಸಲಾಗಿದೆ. ಆಂಗ್ಲ ಭಾಷೆಯ ಕಾರಣದಿಂದಾಗಿ ವಾಣಿಜ್ಯ, ವ್ಯವಹಾರ ಅಧ್ಯಯನ, ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಅಧ್ಯಯನ ಹಲವು ವಿದ್ಯಾರ್ಥಿಗಳಿಗೆ ಸವಾಲಾಗಿದೆ. ಈ ಕಾರಣದಿಂದ ಇಲ್ಲಿಯವರೆಗೆ ಯಶಸ್ಸನ್ನು ಪಡೆಯದ ವಿದ್ಯಾರ್ಥಿಗಳಿಗೆ ಹೊಸ ವೇದಿಕೆಯನ್ನು ಒದಗಿಸುವುದರ ಮೂಲಕ ಅವರ ಆತ್ಮವಿಶ್ವಾಸವನ್ನು ಕಾಪಾಡಲು ಮತ್ತು ಅವರಿಗೆ ಹೊಸ ದಿಕ್ಕನ್ನು ನೀಡುವ ದೃಷ್ಟಿಯಿಂದ ಈ ವಿಚಾರ ಸಂಕಿರಣದ ಚರ್ಚೆಗಳು ಪರಿಣಾಮಕಾರಿಯಾಗುತ್ತವೆ ಎಂಬುದು ನಮ್ಮ ಆಶಯ.

ವಿದ್ವಾಂಸರ ಚಿಂತನೆಗಳ ಬರಹ ರೂಪವಾಗಿ ಹೊಸ ವಿಷಯಗಳ ಬಗ್ಗೆ ನವೀನ ಮಾಹಿತಿಯನ್ನು ಕಂಡುಕೊಳ್ಳುವ ಪುಸ್ತಕವನ್ನು ಓದುಗರಿಗೆ ನೀಡುವುದು.ಸಂಶೋಧನಾ ವಿದ್ಯಾರ್ಥಿಗಳಿಗೆ ಹೊಸ ವಿಷಯಗಳು ಮತ್ತು ಕ್ಷೇತ್ರಗಳನ್ನು ಪರಿಚಯಿಸುವುದು.ಭಾರತೀಯ ಭಾಷೆಗಳ ಮೂಲಕ ರಾಷ್ಟ್ರೀಯ ಐಕ್ಯತೆಯನ್ನು ಕಾಪಾಡುವುದರ ಮೂಲಕ ಭಾಷಾ ಸಂಘರ್ಷವನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸುವುದು.

ಉಪ ವಿಷಯಗಳು:

  • ವೃತ್ತಿಪರ ಮತ್ತು ಕೌಶಲ್ಯಾಧಾರಿತ ಶಿಕ್ಷಣ: ಅಭಿಪ್ರಾಯ ಮತ್ತು ಪರಿಕಲ್ಪನೆ.
  • ಭಾರತೀಯ ಭಾಷೆಗಳ ಮೂಲಕ ವೃತ್ತಿಪರ ಕೌಶಲ್ಯಾಧಾರಿತ ಶಿಕ್ಷಣದ ಅಧ್ಯಯನಕ್ಕೆ ಸಾಮಗ್ರಿಗಳನ್ನು ಸಿದ್ಧಪಡಿಸುವಲ್ಲಿ ಸವಾಲುಗಳು ಮತ್ತು ಪರಿಹಾರಗಳು.
  • ಭಾರತೀಯ ಭಾಷೆಗಳ ಮೂಲಕ ವೃತ್ತಿಪರ ಕೌಶಲ್ಯಾಧಾರಿತ ಶಿಕ್ಷಣದ ಸಾಧ್ಯತೆಗಳು.
  • ಭಾರತದ ವಿವಿಧ ರಾಜ್ಯಗಳ ಅನಾಮಧೇಯ ಜಾನಪದ ಕಥೆಗಳು ಮತ್ತು ಅವುಗಳು ಒಳಗೊಂಡಿರುವ ಉಪಯುಕ್ತ ಮಾಹಿತಿ: ವೃತ್ತಿಪರ ಮತ್ತು ಕೌಶಲ್ಯ ಶಿಕ್ಷಣದ ಸಂದರ್ಭದಲ್ಲಿ.
  • ಪ್ರಾದೇಶಿಕ ಚಿತ್ರಕಲೆ ಮತ್ತು ಅವುಗಳ ಇತಿಹಾಸ ಮತ್ತು ವೃತ್ತಿ ಶಿಕ್ಷಣದ ಸಿದ್ಧಾಂತವನ್ನು ರೂಪಿಸುವಲ್ಲಿ ಭಾಷೆಗಳ ಪಾತ್ರ.
  • ಭಾಷೆ ಮತ್ತು ಅನುವಾದದ ಪಾತ್ರ : ಪ್ರಾದೇಶಿಕ ಕರಕುಶಲ ಕಲೆ ಮತ್ತು ಶಿಲ್ಪಕಲೆಗಳ ವಿಧಾನ ಮತ್ತು ಸಿದ್ಧಾಂತವನ್ನು ಪ್ರಸ್ತುತಪಡಿಸುವ ಸಂದರ್ಭದಲ್ಲಿ.
  • ವೃತ್ತಿ ಶಿಕ್ಷಣದ ಸರಳ ಬೋಧನಾ ವಿಧಾನದ ಆಯಾಮಗಳು.
  • ವೃತ್ತಿಪರ ಬೆಳವಣಿಗೆಯ ದೃಷ್ಟಿಯಿಂದ ಮಾಧ್ಯಮ, ಸಿನಿಮಾ ಮತ್ತು ಸಾಹಿತ್ಯದ ಪಾತ್ರ.
  • ಸ್ಥಾನಿಕ ಭಾರತೀಯ ಭಾಷೆಗಳು ಮತ್ತು ವೃತ್ತಿಪರ ಬೆಳವಣಿಗೆಯ ದೃಷ್ಟಿಕೋನದಿಂದ ಅವುಗಳ ಉಪಯುಕ್ತತೆ.
  • ಭಾರತೀಯ ಭಾಷೆಗಳ ಸಂದರ್ಭದಲ್ಲಿ ಪ್ರಾದೇಶಿಕ ಒಳನುಡಿಗಳ (ಉಪಭಾಷೆಗಳು) ಮಹತ್ವ ಮತ್ತು ಅಗತ್ಯತೆ.
  • ಭಾರತೀಯ ಭಾಷೆಗಳ ಸಹಬಾಳ್ವೆ ಮತ್ತು ಅವುಗಳ ಅಂತರ್‌ ಸಂಬಂಧ.
  • ಸಮಾಜದ ಅಭಿವೃದ್ಧಿಯಲ್ಲಿ ಭಾರತೀಯ ಸಾಹಿತ್ಯದ ಕೊಡುಗೆ.
  • ವಿಚಾರ ಸಂಕಿರಣದ ಆಶಯಕ್ಕೆ ಸಂಬಂಧಿಸಿದ ಇತರ ವಿಷಯಗಳು.

ಸಂಪನ್ಮೂಲ ವ್ಯಕ್ತಿಗಳು

ಹಿಂದಿ

  • ಪ್ರೊ. ಶಿಶಿರ ಪಾಂಡೆಯ – ಜಗದ್ಗುರು ರಾಮಭದ್ರಾಚಾರ್ಯ ದಿವ್ಯಾಂಗ ವಿಶ್ವವಿದ್ಯಾಲಯ, ಉತ್ತರ ಪ್ರದೇಶ
  • ಪ್ರೊ. ಸದಾನಂದ ಭೋಸಲೆ – ಸಾವಿತ್ರಿ ಬಾಯಿ ಫುಲೇ ವಿಶ್ವವಿದ್ಯಾಲಯ, ಪುಣೆ
  • ಡಾ. ಪ್ರದೀಪ ತ್ರಿಪಾಠಿ – ಸಿಕ್ಕಿಂ ಕೇಂದ್ರೀಯ ವಿಶ್ವವಿದ್ಯಾಲಯ, ಸಿಕ್ಕಿಂ
  • ಪ್ರೊ. ಎಸ್‌ ವಿ ಎಸ್‌ ನಾರಾಯಣ ರಾಜು – ತಮಿಳುನಾಡು ಕೇಂದ್ರೀಯ ವಿಶ್ವವಿದ್ಯಾಲಯ, ತಮಿಳುನಾಡು
  • ಡಾ. ಸಿ ಜಯಶಂಕರ ಬಾಬು – ಪಾಂಡಿಚೆರಿ ವಿಶ್ವವಿದ್ಯಾಲಯ, ಪಾಂಡಿಚೆರಿ
  • ಡಾ. ವಿವೇಕಾನಂದ ತಿವಾರಿ – ಜಯಪ್ರಕಾಶ ವಿಶ್ವವಿದ್ಯಾಲಯ, ಛಪ್ರಾ, ಬಿಹಾರ

ಕನ್ನಡ

  • ಡಾ. ಟಿ ಡಿ ರಾಜಣ್ಣ – ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿ
  • ಡಾ. ಎಂ ಎಸ್‌ ದುರ್ಗಾ ಪ್ರವೀಣ – ದ್ರಾವಿಡ ವಿಶ್ವವಿದ್ಯಾಲಯ, ಕುಪ್ಪಂ, ಆಂಧ್ರ ಪ್ರದೇಶ
  • ಡಾ. ಟಿ ಎಚ್‌ ಲವಕುಮಾರ – ಸಂತ ಜೋಸೆಫರ ವಾಣಿಜ್ಯ ಮಹಾವಿದ್ಯಾಲಯ, ಬೆಂಗಳೂರು

ತೆಲುಗು

  • ಪ್ರೊ. ಎನ್‌ ಎ ಡಿ ಪಾಲ್‌ – ಆಂಧ್ರ ವಿಶ್ವವಿದ್ಯಾಲಯ, ವಿಶಾಖಪಟ್ಟಣಂ, ಆಂಧ್ರ ಪ್ರದೇಶ

ಮಲಯಾಳಂ

  • ಪ್ರೊ. ಅಜೀಶ – ಸಂತ ಬರ್ಚ್‌ಮೆನರ ಮಹಾವಿದ್ಯಾಲಯ, ಕೊಟ್ಟಾಯಂ, ಕೇರಳ

ತಮಿಳು

  • ಡಾ. ಎಲ್ ರಾಮಮೂರ್ತಿ – ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ

ಪ್ರಮುಖ ದಿನಾಂಕಗಳು

ನೋಂದಣಿಗಾಗಿ ಕೊನೆಯ ದಿನಾಂಕ: ಜೂನ್ 25, 2023
ಸಾರಲೇಖವನ್ನು ಕಳುಹಿಸಲು ಕೊನೆಯ ದಿನಾಂಕ: ಜೂನ್ 15, 2023
ಪೂರ್ಣ ಪ್ರಬಂಧವನ್ನು ಕಳುಹಿಸಲು ಕೊನೆಯ ದಿನಾಂಕ: ಜೂನ್ 25, 2023
ವಿಚಾರ ಸಂಕಿರಣದ ದಿನಾಂಕ: ಜೂನ್ 29-30, 2023

ಪ್ರಬಂಧ ಸಲ್ಲಿಕಾ ನಿಯಮಾವಳಿಗಳು

  • ಪ್ರಬಂಧದ ಸಾರಲೇಖವನ್ನು ಜೂನ್ 15, 2023ರೊಳಗಾಗಿ ಸಲ್ಲಿಸಬೇಕು. ಸಾರಲೇಖವನ್ನು 300 ಪದಗಳ ಮಿತಿಯೊಳಗೆ ರಚಿಸಬೇಕು.
  • ಗರಿಷ್ಠ ಒಬ್ಬ ಲೇಖಕರಿಗೆ ಸಹ-ಲೇಖಕರಾಗಲು ಅವಕಾಶವಿದೆ.ಸಹ ಲೇಖಕತ್ವದ ಸಂದರ್ಭದಲ್ಲಿ ಕನಿಷ್ಠ ಒಬ್ಬ ಲೇಖಕರಾದರೂ ವಿಚಾರ ಸಂಕಿರಣಕ್ಕೆ ಆಗಮಿಸಿ ಪ್ರಬಂಧ ಮಂಡಿಸಬೇಕು. ಲೇಖಕ-ಸಹ ಲೇಖಕರಿಬ್ಬರೂ ಪ್ರತ್ಯೇಕವಾಗಿ ಪಾವತಿ ಮಾಡಬೇಕು.
  • ಪೂರ್ಣ ಪ್ರಬಂಧದ ವ್ಯಾಪ್ತಿ: ಶೀರ್ಷಿಕೆ, ವಿಷಯ ವಸ್ತು ಮತ್ತು ಪರಾಮರ್ಶನ ಗ್ರಂಥಗಳನ್ನು ಒಳಗೊಂಡು ಪ್ರಬಂಧವು 5000 ಪದಗಳ ಮಿತಿಯಲ್ಲಿ ರಚಿತವಾಗಿರಬೇಕು.
  • ಸ್ಥಳಾವಕಾಶ(ಮಾರ್ಜಿನ): ಲೇಖನದ ಎಲ್ಲ ಬದಿಗಳಲ್ಲಿ '1' ರಷ್ಟು ಸ್ಥಳಾವಕಾಶವನ್ನು ಬಿಟ್ಟಿರಬೇಕು.
  • ಲೇಖನದ ಅಕ್ಷರ ಗಾತ್ರ: ಕನ್ನಡ ಲೇಖನಗಳನ್ನು ನುಡಿ ಅಥವಾ ಯುನಿಕೋಡ್‌ನಲ್ಲಿ 12 ಅಕ್ಷರ ಗಾತ್ರದಲ್ಲಿ ಸಲ್ಲಿಸಬೇಕು. ಪಿಡಿಎಫ್‌ ನಮೂನೆಯಲ್ಲೂ ಸಲ್ಲಿಸುವುದು ಅವಶ್ಯಕ. ವಾಕ್ಯಗಳ ಮಧ್ಯೆ 1.5ರಷ್ಟು ಅಂತರವಿರಬೇಕು.
  • ಶೀರ್ಷಿಕೆಯ ಅಕ್ಷರ ಗಾತ್ರ : ನುಡಿ 14, ಬೋಲ್ಡ್, ವಾಕ್ಯಗಳ ಮಧ್ಯೆ 1.5 ರಷ್ಟು ಅಂತರವಿರಬೇಕು.
  • ಅಡಿ ಟಿಪ್ಪಣಿಗಳು: ನುಡಿ ಅಕ್ಷರ ಗಾತ್ರ 10 ಇದ್ದು, ವಾಕ್ಯಗಳ ಮಧ್ಯೆ 1 ರಷ್ಟು ಅಂತರವಿರಬೇಕು.
  • ಪ್ರಬಂಧವು ಲೇಖಕರ ಮೂಲ ರಚನೆಯಾಗಿರಬೇಕು ಹಾಗೂ ಎಲ್ಲಿಯೂ ಪ್ರಕಟಣೆಗಾಗಿ ಸಲ್ಲಿಸಿರಬಾರದು. ಲೇಖನದ ಜೊತೆಗೆ ಲೇಖಕರು ಲೇಖನವು ಸ್ವರಚಿತವಾಗಿದ್ದು, ಯಾರದೇ ಕೃತಿಯ ನಕಲು ಆಗಿರುವುದಿಲ್ಲ ಎಂಬ ಘೋಷಣಾ ಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.

ಲೇಖಕರು ಸಾರಲೇಖ ಹಾಗೂ ಪೂರ್ಣಪ್ರಬಂಧವನ್ನು anupama.tiwari@alliance.edu.in
ಗೆ ಇ ಮೇಲ್ ಮೂಲಕ ಸಲ್ಲಿಸಬೇಕು. ಆಯ್ದ ಸಂಶೋಧನಾ ಪ್ರಬಂಧಗಳನ್ನು ತಜ್ಞ ಪರಿಶೀಲಿತ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.

ನೋಂದಣಿ ಶುಲ್ಕ

(ಭಾಗವಹಿಸುವ ಪ್ರತಿಯೊಬ್ಬರಿಗೆ)

ವರ್ಗ ಮೊತ್ತ
ವೃತ್ತಿಪರರು ಮತ್ತು ಶಿಕ್ಷಣ ತಜ್ಞರು ₹ 1000
ವಿದ್ಯಾರ್ಥಿಗಳು ₹ 500
Register Here
ಆಂತರಿಕ ನೋಂದಣಿ ಬಾಹ್ಯ ನೋಂದಣಿ ಇಲ್ಲಿ ಪಾವತಿಸಿ

ಸೂಚನೆ:

  • ಇಬ್ಬರು ಲೇಖಕರಿದ್ದ ಸಂದರ್ಭದಲ್ಲಿ ಇಬ್ಬರೂ ಕೂಡ ನೋಂದಣಿ ಶುಲ್ಕವನ್ನು ಪ್ರತ್ಯೇಕವಾಗಿ ಪಾವತಿಸಬೇಕು
  • ಅಲಯನ್ಸ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಯಾವುದೇ ನೋಂದಣಿ ಶುಲ್ಕ ಇರುವುದಿಲ್ಲ. ಆದರೆ ನೋಂದಣಿ ಕಡ್ಡಾಯವಾಗಿರುತ್ತದೆ

ನೋಂದಣಿ ಮಾಡುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆಗಳಿದ್ದಲ್ಲಿ ಕೆಳಗಿನ ಪ್ರಾಧ್ಯಾಪಕರನ್ನು ಸಂಪರ್ಕಿಸಿ:

ಸಂಪರ್ಕ ವಿಳಾಸ

ಭಾಷೆ ಹಾಗೂ ಸಾಹಿತ್ಯ ವಿಭಾಗ, ಅಲಯನ್ಸ್‌ ವಿಶ್ವವಿದ್ಯಾಲಯ
ಚಿಕ್ಕ ಹಾಗಡೆ ಕ್ರಾಸ್‌, ಚಂದಾಪುರ-ಆನೇಕಲ್‌, ಮುಖ್ಯ ರಸ್ತೆ, ಆನೇಕಲ್‌, ಬೆಂಗಳೂರು , ೫೬೨ ೧೦೬– ಕರ್ನಾಟಕ, ಭಾರತ. ನಿರ್ದೇಶನಗಳನ್ನು ಪಡೆಯಿರಿ

ದೂರವಾಣಿ:

+91 88869 95593,+91 99009 04821